ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಪ್ರ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಯಾವಾಗ ರಚನೆಯಾಯಿತು?
ಉ:ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕರ್ನಾಟಕ ಸರ್ಕಾರದ ಅಧಿಸೂಚನೆ ಸಂಖ್ಯೆ: ಲಾ 58 ಎಲ್.ಜೆ.ಎನ್. 93, ಬೆಂಗಳೂರು, ದಿನಾಂಕ 1ನೇ ಅಕ್ಟೋಬರ್ 1994ರ ಅಧಿನಿಯಮದಂತೆ 1 ನವಂಬರ್ 1995 ರಂದು ಜಾರಿಗೆ ಬಂದಿತು.

ಪ್ರ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚಿಸಿದ ಉದ್ದೇಶವೇನು?
ಉ: ಕನ್ನಡ ಅಭಿವೃದ್ಧಿಗಾಗಿ, ಕನ್ನಡ ಅಭಿವೃದ್ಧಿಗೆ ಸಂಬಂಧಪಟ್ಟ ಯೋಜನೆಗಳು ಮತ್ತು ಕಾರ್ಯಕ್ರಮಗಳ ಅನುಷ್ಠಾನದ ಉಸ್ತುವಾರಿಗೆ ಮತ್ತು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಅನುಷ್ಠಾನಗೊಳಿಸುವ ಬಗ್ಗೆ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ನೆಡೆಸುವುದು.

ಪ್ರ: ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಯಾರು ಯಾರನ್ನು ಒಳಗೊಂಡಿರುತ್ತದೆ?
ಉ: ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಒಬ್ಬ ಅಧ್ಯಕ್ಷರು, ಏಳು ಜನ ನಾಮನಿರ್ದೇಶಿತ ಸದಸ್ಯರುಗಳನ್ನು ಒಳಗೊಂಡಿದೆ. ಅಲ್ಲದೆ ಈ ಕೆಳಕಂಡ ಅಧಿಕಾರಿಗಳು ಪದನಿಮಿತ್ತ ಸದಸ್ಯರುಗಳಾಗಿರುತ್ತಾರೆ.
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು,  ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
* ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ.
* ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ.
* ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
* ನಿರ್ದೇಶಕರು, ಭಾಷಾಂತರ ಇಲಾಖೆ.
* ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು.
* ಅಧ್ಯಕ್ಷರು, ಕರ್ನಾಟಕ ಕನ್ನಡ ಸಾಹಿತ್ಯ ಅಕಾಡೆಮಿ.
* ಪ್ರಾಧಿಕಾರದ ಕಾರ್ಯದರ್ಶಿ- ಸದಸ್ಯ ಕಾರ್ಯದರ್ಶಿ

ಪ್ರ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರನ್ನು ಯಾರು ನೇಮಿಸುತ್ತಾರೆ?
ಉ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರನ್ನು ರಾಜ್ಯ ಸರ್ಕಾರವು ನಾಮ ನಿರ್ದೇಶನ ಮಾಡುತ್ತದೆ.

ಪ್ರ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಮತ್ತು ಸದಸ್ಯರ ಅಧಿಕಾರಾವಧಿ ಎಷ್ಟು?
ಉ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಮತ್ತು ಸದಸ್ಯರ ಅಧಿಕಾರಾವಧಿ ಮೂರುವರ್ಷಗಳು. ಸರ್ಕಾರದ ಅಧಿಕಾರಿ ಸದಸ್ಯರಿಗೆ ಇದು ಅನ್ವಯವಾಗುವುದಿಲ್ಲ.

ಪ್ರ: ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರವು ಎಷ್ಟು ನಿಧಿಯನ್ನು ಕೊಡುತ್ತದೆ?
ಉ: ರಾಜ್ಯ ಸರ್ಕಾರವು ಪ್ರತಿ ವರ್ಷ ಪ್ರಾಧಿಕಾರದ ಆಡಳಿತಾತ್ಮಕ ವೆಚ್ಚಗಳಿಗೆ ಸಮನಾದ ಮೊಬಲಗನ್ನು ಪ್ರಾಧಿಕಾರಕ್ಕೆ ಅನುದಾನವಾಗಿ ನೀಡುತ್ತದೆ.

ಪ್ರ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಯೋಜನೆಗಳು/ಕಾರ್ಯಕ್ರಮಗಳು ಯಾವುವು?
ಉ: ರಾಜ್ಯದ ಜಿಲ್ಲಾ ಕೇಂದ್ರಗಳು/ಎಲ್ಲಾ ತಾಲ್ಲೂಕುಗಳಲ್ಲಿ ಕನ್ನಡ ನುಡಿ ಉತ್ಸವ/ಕನ್ನಡ ನುಡಿ ಹಬ್ಬ: ಈ ಕಾರ್ಯಕ್ರಮದ ಮೂಲಕ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಕನ್ನಡ ಭಾಷೆ, ಪರಂಪರೆಯ ಬಗ್ಗೆ ಅರಿವು ಮತ್ತು ಸ್ವಾಭಿಮಾನ ಮೂಡಿಸುವ ಸಮಾವೇಶ/ಜಾಥಾ (ವಿಶೇಷ ಆದ್ಯತೆ ಗಡಿ ತಾಲ್ಲೂಕು/ಜಿಲ್ಲಾ ಕೇಂದ್ರಗಳಿಗೆ)
* ನ್ಯಾಯಾಂಗದಲ್ಲಿ ಕನ್ನಡ: ಕನ್ನಡದಲ್ಲಿ ಹೆಚ್ಚಿನ ಸಂಖ್ಯೆಯ ತೀರ್ಪು ನೀಡಿದ ನ್ಯಾಯಾಧೀಶರಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸುವ ಕಾರ್ಯಕ್ರಮ.
* ಕನ್ನಡ ಮಾಧ್ಯಮ ಪ್ರಶಸ್ತಿ: ರಾಜ್ಯದಲ್ಲಿ ವಿಭಾಗ ಮಟ್ಟದ ಕನ್ನಡ ಮಾಧ್ಯಮ ಪ್ರಶಸ್ತಿ ಸಮಾರಂಭಕ್ಕೆ ಪ್ರತಿ ತಾಲ್ಲೂಕಿನಿಂದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ತರಗತಿಗಳನ್ನು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಅತಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ತಲಾ 3 ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡುವ ಕಾರ್ಯಕ್ರಮ.
* ಹೊರರಾಜ್ಯ: ಹೊರರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ, ಎಸ್.ಎಸ್.ಎಲ್.ಸಿ., ಮತ್ತು ಪಿ.ಯು.ಸಿ,ಯಲ್ಲಿ ಶಾಲೆಗೆ ಅತಿ ಹೆಚ್ಚು ಅಂಕಗಳಿಸಿದ ಮೂರು ವಿದ್ಯಾರ್ಥಿಗಳಿಗೆ ಬಹುಮಾನ.
* ವಿದ್ಯಾರ್ಥಿವೇತನ: ಹೊರರಾಜ್ಯಗಳ ಪ್ರತಿ ವಿಶ್ವವಿದ್ಯಾಲಯಗಳಲ್ಲಿ ಕನ್ನಡದಲ್ಲಿ ಎಂ.ಎ. ವ್ಯಾಸಂಗ ಮಾಡುತ್ತಿರುವ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ತಲಾ ಮಾಸಿಕ ರೂ.2000/- ದಂತೆ ವಿತರಣೆ (7 ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ).
ಕನ್ನಡ ಸಂಸ್ಕೃತಿ ಕಾರ್ಯಕ್ರಮ:
* ರಾಜ್ಯದಲ್ಲಿನ ಸರ್ಕಾರಿ/ಸರ್ಕಾರೇತರ ಕ್ರಿಯಾಶೀಲ ಸಂಸ್ಥೆಗಳು ಸೇರಿದಂತೆ ಸಾರ್ವಜನಿಕ ಉದ್ದಿಮೆ/ಖಾಸಗಿವಲಯದ ಕಾರ್ಖಾನೆಗಳಲ್ಲಿ ಕನ್ನಡ ಸಂಘಟನೆಗಳನ್ನು ಪ್ರೋತ್ಸಾಹಿಸಿ ನಿರಂತರ ಕಾರ್ಯಕ್ರಮಗಳನ್ನು ರೂಪಿಸುವ ಸಲುವಾಗಿ ಕನ್ನಡ ಕಲಿಕಾ ಕೇಂದ್ರಗಳು/ಕನ್ನಡ ಸಂಸ್ಕೃತಿ ಉತ್ಸವ/ಕನ್ನಡ ಸಂಸ್ಕೃತಿ ಶಿಬಿರ/ಭಾಷಾ ಗೋಷ್ಠಿ/ಸಮಾವೇಶ ಕಾರ್ಯಕ್ರಮಗಳ ವೆಚ್ಚ/ಸಹಾಯಧನ ನೀಡಿಕೆ.ಕನ್ನಡದಲ್ಲಿ ಹೆಚ್ಚಿನ ಸಂಖ್ಯೆಯ ತೀರ್ಪು ನೀಡಿದ ನ್ಯಾಯಾಧೀಶರಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸುವ ಕಾರ್ಯಕ್ರಮ.
* ರಾಜ್ಯದ ಗಡಿಭಾಗ/ಹೊರರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕ್ರಿಯಾಶೀಲ ಸಂಸ್ಥೆಗಳ ಸಹಯೋಗದೊಂದಿಗೆ ಕನ್ನಡ ಜಾಗೃತಿ ಸಮಾವೇಶ/ಬಹು ಭಾಷಾ ಭಾವೈಕ್ಯ ಸಮಾವೇಶ /ಉಪನ್ಯಾಸ/ಕಮ್ಮಟ/ಗೋಷ್ಠಿ/ಸಾಂಸ್ಕೃತಿಕ ಉತ್ಸವಗಳಿಗಾಗಿ ವೆಚ್ಚ/ಸಹಾಯಧನ ನೀಡಿಕೆ.
* ಪ್ರಾಧಿಕಾರದ ವತಿಯಿಂದ ಹೊರ ರಾಜ್ಯ/ವಿದೇಶಗಳಲ್ಲಿರುವ ಕನ್ನಡ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳುವ ಕನ್ನಡ ಜಾಗೃತಿ ಸಮಾವೇಶ/ಕನ್ನಡ ಕಲಿಕಾಕೇಂದ್ರ/ಗೋಷ್ಠಿ/ ವಿಚಾರ ಸಂಕಿರಣ/ಸಾಂಸ್ಕೃತಿಕ ಸಂವಾದ/ಕನ್ನಡ ಸಂಸ್ಕೃತಿ ಉತ್ಸವ/ಉಪನ್ಯಾಸಗಳಿಗೆ ವೆಚ್ಚ/ ಸಹಾಯಧನ ನೀಡಿಕೆ.
* ಹೊರ ದೇಶಗಳಲ್ಲಿ ಅನಿವಾಸಿ ಕನ್ನಡಿಗರ ಜೊತೆ ಸಮಾವೇಶ ಕಾರ್ಯಕ್ರಮಕ್ಕೆ ಪ್ರಾಧಿಕಾರದ ಅಧ್ಯಕ್ಷರು/ ಅಧಿಕಾರಿಗಳು ಮತ್ತು ಪ್ರಾಧಿಕಾರ ಅನುಮೋದಿಸುವ ಎಲ್ಲಾ ಪ್ರತಿನಿಧಿಗಳಿಗೆ ತಗಲುವ ಪ್ರವಾಸ ವೆಚ್ಚ.
* ಕನ್ನಡ ಗಣಕ/ಕನ್ನಡ ತಂತ್ರಾಂಶ/ಪ್ರಾಧಿಕಾರದ ಅಂರ್ತಜಾಲ ತಾಣ ಅಭಿವೃದ್ಧಿ ಹಾಗೂ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಗಣಕಯಂತ್ರದಲ್ಲಿ ಶಿಕ್ಷಣ.
ಕನ್ನಡ ಚಿಂತನೆ ಕಾರ್ಯಕ್ರಮ:
* ರಾಜ್ಯದಲ್ಲಿರುವ ಮಹಾನಗರ ಪಾಲಿಕೆಗಳ (8 ಪಾಲಿಕೆಗಳು) ವ್ಯಾಪ್ತಿಯಲ್ಲಿ ಪ್ರಾಧಿಕಾರದ ಸಹಯೋಗದೊಂದಿಗೆ ಹಮ್ಮಿಕೊಳ್ಳುವ (ಸ್ವಾತಂತ್ರ್ಯ ಉದ್ಯಾನವನ/ಸುಚಿತ್ರ ಕಲಾಕೇಂದ್ರ/ನೃಪತುಂಗಬೆಟ್ಟ)/ಹಳೆಗನ್ನಡ ಕಾವ್ಯ-ವ್ಯಾಖ್ಯಾನ (ರಸಗ್ರಹಣ) ಕಾರ್ಯಕ್ರಮಕ್ಕೆ ತಗುಲುವ ವೆಚ್ಚ/ಸಹಾಯಧನ ನೀಡಿಕೆ.
* ರಾಜ್ಯದಲ್ಲಿನ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಜಾಗೃತಿ ಕಾರ್ಯಕ್ರಮ.
* ಕನ್ನಡ ಭವನ: ರಾಜ್ಯದಲ್ಲಿ/ರಾಜ್ಯದ ಗಡಿ ಭಾಗಗಳಲ್ಲಿ/ಹೊರರಾಜ್ಯಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಸಹಾಯಧನ ನೀಡಿಕೆ - ಹೋಬಳಿ ಮಟ್ಟದಲ್ಲಿ ರೂ.10.00ಲಕ್ಷ, ತಾಲ್ಲೂಕು/ಜಿಲ್ಲಾ ಕೇಂದ್ರಗಳಲ್ಲಿ ರೂ.15.00 ಲಕ್ಷಗಳು. (ವಿಶೇಷ ಸಂದರ್ಭದಲ್ಲಿ ಗರಿಷ್ಠ 20 ಲಕ್ಷ ಮೀರದಂತೆ)
* ಪೀಠೋಪಕರಣ ಹಾಗೂ ಪಾಠೋಪಕರಣ: ರಾಜ್ಯದಲ್ಲಿನ/ಗಡಿ ಭಾಗದಲ್ಲಿನ ಹಾಗೂ ಹೊರರಾಜ್ಯದಲ್ಲಿರುವ ಕನ್ನಡ ಶಾಲೆಗಳ ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕಗಳನ್ನು ಶೇಖರಿಸಲು ಕಪಾಟುಗಳನ್ನು ಹಾಗೂ ಅರ್ಹ ಶಾಲೆಗಳಿಗೆ ಪೀಠೋಪಕರಣಗಳ ಖರೀದಿ ಮತ್ತು ಅರ್ಹ ಕನ್ನಡ ಸಂಸ್ಥೆಗಳಿಗೆ ಪೀಠೋಪಕರಣ /ಕಪಾಟುಗಳು ಹಾಗೂ ಪಾಠೋಪಕರಣಗಳ ಖರೀದಿಗಾಗಿ ಪ್ರಾಧಿಕಾರದಿಂದ ಸಹಾಯಧನ ನೀಡಿಕೆ.
ಆಡಳಿತದಲ್ಲಿ ಕನ್ನಡ:
* ಆಡಳಿತದಲ್ಲಿ ಕನ್ನಡ ತರಬೇತಿ ಕಾರ್ಯಕ್ರಮ/ಕನ್ನಡ ಶಾಸ್ತ್ರೀಯ ಭಾಷೆ ಸಂಬಂಧ ಕ್ರಿಯಾ ಯೋಜನೆ ರೂಪಿಸುವ ಗೋಷ್ಠಿ/ವಿಚಾರ ಸಂಕಿರಣಗಳನ್ನು ಏರ್ಪಡಿಸುವುದು.
* ಕನ್ನಡದಲ್ಲಿ ಐ.ಎ.ಎಸ್/ಐ.ಪಿ.ಎಸ್/ಐ.ಎಫ್.ಎಸ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು.
* ವಿಶೇಷ ಪದಕೋಶಗಳ ಮುದ್ರಣ/ಕಾನೂನು ತಜ್ಞರು/ಭಾಷಾ ತಜ್ಞರು/ಶಿಕ್ಷಣ ತಜ್ಞರು/ವಿಷಯ ತಜ್ಞರು/ಸಂಘಟನಕಾರರು/ಸಾಂಸ್ಕೃತಿಕ ನಿರ್ವಾಹಕರು ಇವರ ಸಲಹೆಯನ್ನು ಪ್ರಾಧಿಕಾರದ ಕಾರ್ಯಾಲಯಗಳಲ್ಲಿ ಬಳಸಿಕೊಳ್ಳುವುದು.
ಪ್ರಚಾರ ಹಾಗೂ ಕನ್ನಡ ಜಾಗೃತಿ:
* ಕನ್ನಡ ನಾಮ ಫಲಕ ಸಪ್ತಾಹ ಮತ್ತು ಕನ್ನಡ ಪ್ರಚಾರ ಫಲಕ/ಜಾಹೀರಾತು/ಅಭಿವೃದ್ಧಿ ಪ್ರಚಾರ ನಾಮಫಲಕಗಳನ್ನು ರಾಜ್ಯದ ಎಲ್ಲಾ ತಾಲ್ಲೂಕುಗಳು/ಪ್ರಮುಖ ಕೇಂದ್ರಗಳಲ್ಲಿ ಪ್ರಕಟಣೆ ಮಾಡುವುದು.
* ಕರಪತ್ರ/ಕೈಪಿಡಿ/ಭಿತ್ತಿಪತ್ರ/ಅಂಟುಚೀಟಿಗಳ ಮುದ್ರಣ.
* ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಾಡು-ನುಡಿಗೆ ಸಂಬಂದಿಸಿದಂತ ಪುಸ್ತಕಗಳನ್ನು ಹೊರತರುವುದು.

ಪ್ರ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಕಾರ್ಯಗಳು ಯಾವುವು?
* ರಾಜ್ಯ ಸರ್ಕಾರದ ಆಡಳಿತ ಭಾಷಾ ನೀತಿಯ ಅನುಷ್ಠಾನದಲ್ಲಿ ಬೇರೆಬೇರೆ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ಎಲ್ಲ ಸಂಸ್ಥೆಗಳು ಮತ್ತು ಸ್ಥಳೀಯ ನಿಕಾಯಗಳು ಮತ್ತು ರಾಜ್ಯ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸತಕ್ಕದ್ದು.
* ರಾಜ್ಯ ಸರ್ಕಾರ ಅಂಗೀಕರಿಸಿರುವ ಡಾ. ಸರೋಜಿನಿ ಮಹಿಷಿ ವರದಿಯ ಶಿಫಾರಸುಗಳನ್ನು ಪರಿಣಾಮಕಾರಿಯಾಗಿ ಅನುಷಾನಕ್ಕೆ ತರುವ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವುದು.
* ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಜಾರಿಗೆ ತರುವಲ್ಲಿ ಅಡಚಣೆಗಳನ್ನು ಗುರ್ತಿಸಿ, ಅವುಗಳ ನಿವಾರಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳತಕ್ಕದು.
* ಅಧಿಕಾರಿಗಳಿಗೆ ಮತ್ತು ನೌಕರರಿಗೆ ಕನ್ನಡ ಬಳಕೆಗೆ ಅನುಕೂಲವಾದ ತರಬೇತಿ ಕಾರ್ಯಕ್ರಮಗಳನ್ನು, ಶಿಬಿರಗಳನ್ನು, ಪ್ರದರ್ಶನಗಳನ್ನು ಮತ್ತು ವಿಚಾರ ಸಂಕಿರಣಗಳನ್ನು ಏರ್ಪಡಿಸತಕ್ಕದು ಮತ್ತು ಕನ್ನಡೇತರರಿಗೆ ಕನ್ನಡ ಕಲಿಕೆ ಕಾರ್ಯಕ್ರಮಗಳನ್ನು ಮತ್ತು ಆ ಸಂಬಂಧ ಪಠ್ಯಕ್ರಮ, ಸಾಹಿತ್ಯ ಸಿದ್ಧಪಡಿಸತಕ್ಕದು.
* ಕನ್ನಡ ಅಭಿವೃದ್ಧಿಗೆ ಸಂಬಂಧಿಸಿದ ಉಪಯುಕ್ತ ಪ್ರಕಟಣೆಗಳನ್ನು ಪ್ರಕಟಿಸತಕ್ಕದ್ದು, ಖರೀದಿಸತಕ್ಕದ್ದು ಮತ್ತು ವಿತರಿಸತಕ್ಕದ್ದು.
* ರಾಜ್ಯದಲ್ಲಿ ಹೆಚ್ಚು ಜನ ಸಂಪರ್ಕ ಹೊಂದಿರುವ ಕೇಂದ್ರ ಸರ್ಕಾರದ ಕಛೇರಿಗಳು, ಬ್ಯಾಂಕ್ಗಳು, ಅಂಚೆ ಕಛೇರಿಗಳು ಮತ್ತು ಮತ್ತಿತರ ಕಛೇರಿಗಳು ಮತ್ತು ಉದ್ದಿಮೆಗಳಲ್ಲಿ ದೈನಂದಿನ ಬಳಕೆಯಲ್ಲಿರುವ ನಮೂನೆ, ನೋಟೀಸು, ನಾಮಫಲಕಗಳಲ್ಲಿ ಕೇಂದ್ರ ಸರ್ಕಾರದ ಭಾಷಾ ನೀತಿಗೆ ಅನುಗುಣವಾಗಿ ಪ್ರಾದೇಶಿಕ ಭಾಷೆಯನ್ನು ಬಳಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸತಕ್ಕದು ಮತ್ತು ಈ ಸಂಬಂಧವಾಗಿ ಅಂಥ ಕಛೇರಿಗಳೊಂದಿಗೆ ಪತ್ರವ್ಯವಹಾರ ಕೈಗೊಳ್ಳತಕ್ಕದು.
* ಆಡಳಿತ ಪೂರಕ ಸಾಹಿತ್ಯದ ರಚನೆ, ಪರಿಷ್ಕರಣೆ, ಮುದ್ರಣ ಮತ್ತು ವಿತರಣೆ ವಿಷಯಗಳಲ್ಲಿ ತೀರ್ಮಾನ ಕೈಗೊಳ್ಳತಕ್ಕದು ಮತ್ತು ಈ ಕ್ಷೇತ್ರದಲ್ಲಿನ ಪ್ರಗತಿಯನ್ನು ಆಗಿಂದಾಗ್ಗೆ ಸಮೀಕ್ಷಿಸಿ ಸೂಕ್ತ ಕ್ರಮ ಸೂಚಿಸತಕ್ಕದು.

ಪ್ರ: ಇದುವರೆಗೂ ಎಷ್ಟು ಜನ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರುಗಳು ನೇಮಕವಾಗಿದ್ದಾರೆ?
ಮಾನ್ಯ ಅಧ್ಯಕ್ಷರುಗಳ ವಿವರ:-

ಕ್ರ.

ಸಂ.

ಹೆಸರು

ಅಧಿಕಾರಾವಧಿ

ರಿಂದ

ವರೆಗೆ

ಕನ್ನಡ ಕಾವಲು ಸಮಿತಿ

1

ಶ್ರೀ ಸಿದ್ದರಾಮಯ್ಯ

1983

1983

2

ಶ್ರೀ ದೊಡ್ಡಮೇಟಿ ಜ್ಞಾನದೇವ ಶಿವನಾಗಪ್ಪ

1983

1984

3

ಡಾ.ಪಾಟೀಲ ಪುಟ್ಟಪ್ಪ

1984

1989

4

ಡಾ.ಜಿ.ನಾರಾಯಣ

1992

1995

ಕನ್ನಡ ಅಭಿವೃದ್ಧಿ ಪ್ರಾಧಿಕಾರ

1

ಡಾ.ಜಿ.ನಾರಾಯಣ

1995

1995

2

ಶ್ರೀ ಹೆಚ್.ನರಸಿಂಹಯ್ಯ

1995

1996

3

ಪ್ರೊ.ಚಂದ್ರಶೇಖರ ಪಾಟೀಲ್

23-10-1996

30-06-1999

4

ಡಾ.ಬರಗೂರು ರಾಮಚಂದ್ರಪ್ಪ

22-01-2000

13-01-2003

5

ಶ್ರೀ  ಬಿ.ಎಂ.ಇದಿನಬ್ಬ

24-03-2003

15-03-2006

6

ಡಾ.ಸಿದ್ದಲಿಂಗಯ್ಯ

12-06-2006

10-06-2008

7

ಡಾ.ಮುಖ್ಯಮಂತ್ರಿ ಚಂದ್ರು

11-06-2008

09-06-2014